Rashmika Mandanna : ನಟಿ ರಶ್ಮಿಕಾ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಹರಿದಾಡುತ್ತಿವೆ. ಅವರನ್ನು ಕರ್ನಾಟಕ ಸಿನಿಮಾಗಳಿಂದ ಬ್ಯಾನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣವಾದ ಸಂದರ್ಶನದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ರಶ್ಮಿಕಾ ತಮಗೆ ಸಿನಿಮಾರಂಗಕ್ಕೆ ಬರಲು ಇಷ್ಟ ಇರಲಿಲ್ಲ, ಬಲವಂತವಾಗಿ ಸಿನಿಮಾಗೆ ಕರೆದ್ರೂ ಎಂದು ಹೆಳಿದ್ದಾರೆ.
ಖಾಸತಿ ವಾಹಿನಿ ನಡೆಸಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಸಿನಿರಂಗದ ಪಯಣ ಕುರಿತು ಹೇಳುವಾಗ ಈ ಮಾತನ್ನು ಹೇಳಿದ್ದಾರೆ. ಕಾಲೆಜೀನಲ್ಲಿ ಇರುವಾಗ ಪ್ರೇಶ್ ಪೇಸ್ ಎಂಬ ಸ್ಪರ್ಧೆಗೆ ನನ್ನನ್ನು ಆಯ್ಕೆ ಮಾಡಲಾಗಿತ್ತು. ಕಾಂಪಿಟೇಶನ್ನಲ್ಲಿ ನಾನು ಗೆದ್ದೆ ಆಗ ಟೈಮ್ಸ್ ಆಪ್ ಇಂಡಿಯಾ ಪುಟದಲ್ಲಿ ನನ್ನ ಫೋಟೋ ಹಾಕಿದ್ರು, ಅದನ್ನ ನೋಡಿದ ಕಿರಿಕ್ ಪಾರ್ಟಿ ಚಿತ್ರತಂಡ ನನಗೆ ಕರೆಮಾಡಿದ್ರು. ಮೊದಲಿಗೆ ನಾನು ಇದನ್ನು ಪ್ರಾಂಕ್ ಕಾಲ್ ಅಂದುಕೊಂಡಿದ್ದೆ.
ಇದನ್ನೂ ಓದಿ: ಪ್ರಭಾಸ್- ಕೃತಿ ಮದುವೆ : ಅನುಷ್ಕಾ ಶೆಟ್ಟಿ ಲವ್ ಮ್ಯಾಟರ್ ಸುಳ್ಳಾ.. ಏನಿದರ ಮರ್ಮ..!
ನಂತರ ಅವರು ನನ್ನ ಕಾಲೇಜ್ ಹುಡುಕಿಕೊಂಡು ಬಂದ್ರು. ನಾನು ಸಿನಿಮಾದಲ್ಲಿ ನಟಿಸಲು ಇಂಟ್ರೇಸ್ಟ್ ಇಲ್ಲ ಸ್ಟಡಿ ಕಂಟಿನ್ಯೂವ್ ಮಾಡುವುದಾಗಿ ತಿಳಿಸಿದೆ. ಆದ್ರೆ ಅವರು ನಮ್ಮ ಲಕ್ಚರ್ಸ್ ಜೊತೆ ಮೀಟಿಂಗ್ ಮಾಡಿದ್ರ, ನಮ್ಮ ಲಕ್ಚರ್ಸ್ ಕೂಡಾ ಒಂದು ಒಳ್ಳೆ ಆಫರ್ ಬಂದಿದೆ ಟ್ರೈ ಮಾಡು ಅಂದಿದ್ರು. ಆದ್ರೂ ನಾನು ಅವರಿಗೆ ನೋ ಅಂದ್ರೆ. ಕೊನೆಗೆ ಲಕ್ಚರ್ಸ್ ಮೇಡಂಗೆ ನಿಮಗಾಗಿ ಮಾಡ್ತೀನಿ ಅಂತ ಹೇಳಿದೆ. ಅಡಿಷನ್ ಮಾಡುವಾಗ್ಲೂ ನನಗೆ ಬರಲ್ಲ ಅಂತಾನೇ ಹೇಳಿದೆ.
ಇದನ್ನೂ ಓದಿ: ಅಜಯ್ ರಾವ್ ನೂತನ ಸಿನಿಮಾಗೆ ‘ಯುದ್ಧಕಾಂಡ’ ಟೈಟಲ್ - ಮೊದಲ ಬಾರಿ ಲಾಯರ್ ಪಾತ್ರದಲ್ಲಿ ಅಜಯ್ ರಾವ್
ಆದ್ರೆ ಅವರು ಜಸ್ಟ್ ಕ್ಯಾಮೆರಾ ಮುಂದೆ ನಿಂತು ಮಾತಾಡು ಅಂತ ಹೇಳಿದ್ರು. ಒಕೆ ಅಂತ ಎಲ್ಲಾ ಮಾಡಿದೆ. ಸಿನಿಮಾ ಹಿಟ್ ಆಯ್ತು. ನಟನೆ ಅಷ್ಟು ಸುಲಭ ಅಂತ ಗೊತ್ತಿಲ್ಲ. ನಂತರ ಆಫರ್ ಬಂದವು ಲೈಫ್ ಹಾಗೆ ಮುಂದೆ ಹೋಯ್ತು ಅಂತ ತಮ್ಮ ಸಿನಿ ಜರ್ನಿಯ ಕುರಿತು ಮನಬಿಚ್ಚಿ ಮಾತನಾಡಿದ್ರ. ಇನ್ನು ಈ ಸಂದರ್ಶನದಲ್ಲಿ ಪ್ರೋಡಕ್ಷನ್ ಹೆಸರು ಹೇಳದೆ ಸನ್ನೆ ಮಾಡಿದ ಹಿನ್ನೆಲೆ ಹತ್ತಿದ ಮೆಟ್ಟಿಲನ್ನು ರಶ್ಮಿಕಾ ಮರೆತಿದ್ದಾರೆ ಎಂದು ನೆಟ್ಟಿಗರು ರಶ್ಮಿಕಾ ವಿರುದ್ದ ಕಿಡಿಕಾರಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.